ಭಾರತೀಯರಿಗೆ ದೇಶಭಕ್ತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ.... ಹೀಗೆ ಇನ್ನೂ ಹಲವಾರು ವಿಷಯಗಳು ನೆನಪಾದರೆ ಮೊದಲು ನಮ್ಮ ಕಣ್ಣ ಮುಂದೆ ಬರುವುದು ಯೋಧರು. ಯೋಧರ ಬಗ್ಗೆ ಎಷ್ಟು ಹೇಳಿದರೂ, ಹೆಮ್ಮೆ ಪಟ್ಟರೂ ಸಾಲದು. ಹೀಗಿರುವಾಗ ಇಂದು ನಮ್ಮ ಮನೆಗೆ ಯೋಧ ಕ್ಯಾಪ್ಟನ್ ಸೂರಜ್ ರವರು ಭೇಟಿ ನೀಡಿ, ನಮ್ಮ ಆತಿಥ್ಯವನ್ನು ಸ್ವೀಕರಿಸಿ, ಕೆಲವು ಗಂಟೆಗಳ ಸಮಯವನ್ನು ನಮ್ಮೊಂದಿಗೆ ವಿನಿಯೋಗಿಸಿದರು. ನಂತರ ನಮ್ಮ ಜನನಿ ಟ್ರಸ್ಟ್ ಗೆ ಭೇಟಿ ನೀಡಿದರು. ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಕ್ಕಳು ಯುದ್ಧ, ಯೋಧರ ಕೆಲಸ,ನಿದ್ರೆ,ವಸತಿ,ಮನೆ, ಊಟ, ರಜೆ, ಅವರು ಅನುಭವಿಸಿದ ಕಷ್ಟಗಳು, ವೆಪನ್, ಆರ್ಮಿ ಸೇರುವ ಬಗೆ...... ಹೀಗೆ ಹಲವಾರು ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿದುಕೊಂಡರು. ರಾಖಿ ಕಟ್ಟಿ, ಆಟೋಗ್ರಾಫ್ ತೆಗೆದುಕೊಂಡು, ಕೆಲವರು ಕಾಲು ಮುಗಿದು, ಕೈ ಮುಗಿದು, ಶೇಖ್ ಹ್ಯಾಂಡ್ ಮಾಡಿ, ತಾವು ಸಹ ಆರ್ಮಿ ಸೇರಿ ಕ್ಯಾಪ್ಟನ್ ಸೂರಜ್ ರವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ನಂತರ ಜನನಿ ಟ್ರಸ್ಟ್ ನ ಪರವಾಗಿ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ಕ್ಯಾಪ್ಟನ್ ಸೂರಜ್ ರವರಿಗೆ ನೀಡಿ, ಗ್ರೂಪ್ ಫೋಟೋ ತೆಗೆದುಕೊಳ್ಳಲಾಯಿತು.
When Indians think of patriotism, Independence Day, Republic Day... and many more things, the first thing that comes to our mind is the soldiers. No matter how much we talk about the soldiers, we are not proud of them enough. Today, soldier Captain Suraj visited our house, accepted our hospitality, and spent a few hours with us. Then he visited our Janani Trust. The children were so happy. The children listened to many interesting things about war, the work of soldiers, sleep, accommodation, home, food, leave, the hardships they went through, weapons, how to join the army... They tied rakhi, took autographs, some even shook hands, made a sheikh hand, and said that they would also join the army and meet Captain Suraj. Then, a book was given to Captain Suraj as a souvenir on behalf of the Janani Trust, and a group photo was taken.